Wednesday, June 2, 2010

ನಳಪಾಕ

ಈ ಹೆ೦ಡತಿಯರು ನಮ್ಮನ್ನ ಏನು ಅ೦ದುಕೊ೦ಡು ಬಿಡ್ತಾರಪ್ಪ,ನಮಗೆ ಏನು ಕೆಲಸ ಬರೋದೇ ಇಲ್ಲ ಅ೦ತ.ನನ್ನ ಹೆ೦ಡತಿನೂ ಹಾಗೇ ಅ೦ದುಕೊಳ್ಳಿ. ಈ ಬೆ೦ಗಳೂರು ಹುಡುಗಿನ ಮಧುವೆ ಆದ್ರೆ ಒ೦ದು ಒಳ್ಳೆದು ಅ೦ದ್ರೆ ೧-೨ ತಿ೦ಗಳು ತವರು ಮನೆಗೆ ಹೋಗಿ ಅಲ್ಲೇ ಠಿಕಾಣಿ ಹೂಡಲ್ಲ ಆದ್ರೆ ಪ್ರತೀ ದಿನಾ ಅರ್ಧ ಗ೦ಟೆ ಹೋಗಿಬರ್ತಾರೆ ಯಾಕೆ ಅ೦ತ ಗೊತ್ತಿಲ್ಲಪ್ಪ,ಯಾವಾಗ್ಲಾದ್ರು ಒ೦ದು ದಿನ ಅಲ್ಲೇ ಉಳಿದುಕೊಳ್ಳಬೇಕು ಅ೦ದ್ರೆ ಮನೆ ಜವಬ್ದಾರಿ ನಮಗೆ ಗೊತ್ತೇ ಇಲ್ಲ ಅ೦ತ ದಿನಾ ಇಡಿ ಪಾಠ ಮಾಡ್ತಾರೆ.

ನನಗೂ ಹಾಗೇ ಒ೦ದು ಪ್ರಸ೦ಗ ಬ೦ತು.ನನ್ನ ಹೆ೦ಡತಿ ಯಾವುದೊ ಸಮಾರ೦ಭಕ್ಕೆ ಭೇಟಿ ನೀಡಬೇಕಿತ್ತು ಅದಕ್ಕೆ ೨ ದಿನ ಅವಳ ಅಮ್ಮನ ಮನೆಯಲ್ಲಿ ಉಳಿಯುವ ಪ್ರಸ೦ಗ ಬ೦ತು. ಆ ದಿನದಿ೦ದ ನನಗೆ ಪಾಠ ಶುರುವಾಯ್ತು ಅಡಿಗೆ ಮನೆಯ ಒ೦ದು ದರ್ಶನವಾಯ್ತು, ಯಾವ ಯಾವ ಡಬ್ಬದಲ್ಲಿ ಏನು ಏನು ಇದೆ ಅ೦ತ ತೋರಿಸಿಕೊಟ್ಟಳು, ಅಡಿಗೆ ಮನೆ ಅ೦ದ್ರೆ ಏನು ದೊಡ್ಡ ಕಾರ್ಖಾನೆ ಏ೦ದುಕೊ೦ಡು ಬಿಡ್ತಾರೆ ಈ ಹೆ೦ಡ್ತೀರು,...

Monday, August 18, 2008

ವಿದ್ಯಾರ್ಥಿ ಭವನದ ಮಸಾಲೆ ದೋಸೆ

ಬೆಂಗಳೂರಲ್ಲಿ ಯಾವುದೇ ಐ.ಟಿ. ಕಂಪನಿ ಯಲ್ಲಿ ಫ್ರೆಷರ್ಸ ಗಳಿಗೆ ಕೆಲಸ ಸುಲಭವಾಗಿ ಸಿಗಬಹುದು ಆದರೆ ವಿದ್ಯಾರ್ಥಿ ಭವನದಲ್ಲಿ ಹೋದ ತಕ್ಶಣ ಜಾಗ ಸಿಗುವುದು ಕಷ್ಟ.

Saturday, May 10, 2008

ಆ ಹುಡುಗಿ

ದಿನಾ ಗಿರಿನಗರ ಸರ್ಕಲ್ ನಲ್ಲಿ ಬಸ್ಸಿಗೇ ಕಾಯ್ತಾ ಇದ್ದಾಗ ಸ್ಕೂಟಿಯಲ್ಲಿ ಬರ್ತಾ ಇದ್ದ ಹುಡುಗಿ ಸಡನ್ನಾಗಿ ನನ್ನ ಪಕ್ಕದಲ್ಲಿ ನಿಂತು ಶಿವಾಜಿನಗರದ ಬಸ್ಸು ಏಷ್ಟು ಹೊತ್ತಿಗೆ ಬರುತ್ತೆ ಅಂತ ಕೇಳಿದಾಗ ಸ್ವಲ್ಪ ಆಶ್ಚರ್ಯ ಆಯ್ತು.
ದಿನಾ ಕರೆಕ್ಟಾಗಿ ಒಂಬತ್ತು ಗಂಟೆಗೆ ಸರಿಯಾಗಿ ಬಸ್ಟಾಂಡ್ ಮುಂದುಗಡೆ ಆ ಹುಡುಗಿನ ನಾನು ನೋಡ್ತಾ ಇದ್ದೆ,ದೊರದಲ್ಲಿ ನೋಡ್ತಾ ಇದ್ದರು ಏನೋ ಆಕರ್ಷಣೆ ಇತ್ತು. ಆದ್ರೆ ಸಡನ್ನಾಗಿ ನನ್ನ ಹತ್ತಿರ ಬಂದು ಕೇಳಿದಾಗ ಸ್ವಲ್ಪ ಭಯ ಸ್ವಲ್ಪ ಆತಂಕ ಸ್ವಲ್ಪ ಖುಶಿನೊ ಆಯ್ತು.
ನಾನು ಅವಳಿಗೆ ಉತ್ತರ ಹೇಳೋ ಹೊತ್ತಿಗೆ ಬಸ್ ಬಂದೇ ಬಿಡ್ತು. ತುಂಬಾ ಜನ ಇದ್ದಿರರಿಂದ ನಾನು ಆಕಡೆ ತಿರುಗುವುದರೊಳಗಡೆ ಅವಳು ಬಸ್ಸ್ ಹತ್ತೇ ಆಗಿತ್ತು. ನಾನು ಹಂಗೆ ಹಿಂಗೇ ಓಳಗಡೆ ನುಗ್ಗಿದೆ,ಎಲ್ಲೂ ಸೀಟ್ ಇರಲಿಲ್ಲ, ನನ್ನ ಹಣೆಬರಹ ಎಂದು ಸುಮ್ಮನೇ ನಿಂತಿದ್ದಾಗ ಯಾರೋ ಕರೆದ ಹಾಗೆ ಆಯ್ತು,ತಿರುಗಿ ನೋಡಿದರೆ ಅದೇ ಹುಡುಗಿ ನನಗೋಸ್ಕರ ಜಾಗ ಹಿಡಿದು ಕರೆದಳು. ನಾನು ಹಿಂದೆ ಮುಂದೆ ನೋಡದೆ ಅವಳ ಬಳಿ ಕುಳಿತೆ.

ಇನ್ನು ಇದೆ.....

Friday, February 29, 2008

ಪಯಣ...ಐದು ಸಾವಿರದಿಂದ ಐವತ್ತು ಸಾವಿರದವರೆಗೆ

ಓದು ಮುಗಿಸಿ ಕೆಲಸ ಅರಸಿ ಬೆಂಗಳೊರಿಗೆ ಬಂದು ಕಂಪನಿಯಿಂದ ಕಂಪನಿಗೆ ಸುತ್ತಾಡಿ ಸುತ್ತಾಡಿ ಸಾಕಾಗಿ ಹೋದಾಗ ,ಐದು ಸಾವಿರ ಸಂಬಳ ಬಂದ್ರು ಸಾಕಪ್ಪ ಅನ್ನಿಸಿಬಿಟ್ಟಿರುತ್ತದೆ. ಅದೇ ಐದು ಸಾವಿರ ಸಂಬಳ ಬಂದಾಗ ಇಷ್ಟೆಲ್ಲ ಓದಿ ಬರೀ ಐದು ಸಾವಿರ ಸಂಬಳನಾ ? ಅನ್ಸುತ್ತೆ..ಬೇರೆ ಅವರ ಸಂಬಳ ನೋಡಿ ಆ ನನ್ಮಗ ನನಗಿಂತ ಕಮ್ಮಿ ಮಾರ್ಕ್ಸ್ ಬಂದ್ರು ನನಗಿಂತ ಹತ್ತು ಸಾವಿರ ಜಾಸ್ತಿ ದುಡೀತಾನೆ..ನನಗೆ ಯಾವಾಗಪ್ಪ ಹದಿನೈದು ಸಾವಿರ ಸಂಬಳ ಬರೋದು ಅನ್ಸುತ್ತೆ. ಐದು ಸಾವಿರ ಬರ್ತಾ ಇದ್ದಾಗ ಫೋರಂ ಶಾಪಿಂಗ್ ಅಂದ್ರೆ ಬರೀ ವಿಂಡೋ ಶಾಪಿಂಗ್ ಅಷ್ಟೆ... ಸಿನೇಮಾ ಏನಾದ್ರು ನೋಡ್ಬೇಕು ಅಂದ್ರೆ ಕಾಮಾಕ್ಯ ,ಊರ್ವಶಿ,ನವರಂಗ್...ಎನಾರ ತಿನ್ನಬೇಕು ಅಂದ್ರೆ ಶಾಂತಿಸಾಗರ್....ಅದು ಇದು ಅಷ್ಟೇ. ಬ್ರಾಂಡೆಡ್ ಬಟ್ಟೆಗೆ ಸುಮ್ಮನೆ ಒಂದು ಎರಡು ಸಾವಿರ ಕೊಡೋ ಬದಲು ಅದೇ ದುಡ್ಡಿನಲ್ಲಿ ಮೊರು ಜೊತೆ ಬಟ್ಟೆ ಬರುತ್ತೆ ಅಂತ ಅನ್ಸುತ್ತೆ.

ಅದೇ ಹದಿನೈದು ಸಾವಿರ ಸಂಬಳ ಬರೋ ಹೊತ್ತಿಗೆ ಟು ವೀಲರ್ ಬಂದು ಬಿಟ್ಟಿರುತ್ತದೆ.ಮುಂಚೆ ಅರಾಮಾಗಿ ಹೋಗುತ್ತಿದ್ದ ಬಿಟಿಎಸ್ ಬಸ್ಸು ಸಾಕಾಗಿ ಹೋಗಿರುತ್ತದೆ.ಬೇರ ಅವರನ್ನು ನೋಡಿ ಅದೆಂಗೆ ಬಸ್ಸಿನಲ್ಲಿ ಬರ್ತೀರಾ ಅಂತೀವಿ.ಕೆಲ ಸಮಯದ ಮುಂಚೆ ನಾವುಗಳು ಬಸ್ಸಿನಲ್ಲಿ ಜೋತಾಡಿ ಬರ್ತಾ ಇದ್ವಿ ಅಂತ ಮರೇತೇ ಹೋಗಿರುತ್ತದೆ.

ಓದಿದ ಕಾಲೇಜಿಗೆ ಹೋದ್ರೆ ಒಂತರಾ ರೆಸ್ಪೆಕ್ಟ್ ಸಿಗತ್ತೆ.ಕಾಲೇಜಿನಲ್ಲಿ ಪಾಠ ಮಾಡಿದ ಲೆಕ್ಚರರ್ಸ್ ಒಂತರಾ ನೋಡ್ತಾರೆ.ನಮಗೇ ನಮ್ಮ ಬಗ್ಗೆ ಒಂತರಾ ಹೆಮ್ಮೆ ಅನ್ಸುತ್ತೆ.

ಕ್ರಮೇಣ ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರ ಸಂಬಳ ಬರುತ್ತದೆ. ಟು ವೀಲರ್ ಸರ್ವಿಸ್ ಕೊಟ್ಟಾಗ ಮುಂಚೆ ಬಸ್ಸಿನಲ್ಲಿ ಬರ್ತಾ ಇದ್ದೋರು ಆಟೋ ರಿಕ್ಷ ದಲ್ಲಿ ಬರಕ್ಕೆ ಪ್ರಾರಂಭ ಮಾಡ್ತೀವಿ. ಮುಂಚೆ ಬರೀ ವಿಂಡೋ ಶಾಪಿಂಗ್ ಮಾಡ್ತಾ ಇದ್ದ ಜಾಗದಲ್ಲಿ ಬಟ್ಟೆಬರೆ ಕೊಂಡುಕೊಳ್ಳಲು ಪ್ರಾರಂಭ ಮಾಡ್ತೀವಿ.ವೀಕೆಂಡ್ಸ್ ಹೊರಗಡೆ ತಿನ್ನಲು ಸ್ಟಾರ್ಟ ಮಾಡ್ತೀವಿ. ಮುಂಚೆ ಬರೀ ಶಾಂತಿಸಾಗರ ಗೆ ಊಟಕ್ಕೆ ಹೋಗ್ತಾ ಇದ್ದೋರು ಈಗ ಇಂದಿರಾನಗರ,ಎಂಜಿ ರೋಡ್ ,ಬ್ರಿಗೇಡ್ ರೋಡ್ ಗೆ ಹೋಗ್ತೀವಿ.ಮುಂಚೆ ಗಾಂಧಿಬಝಾರ್,ಮಲ್ಲೇಶ್ವರಂ ಲಿ ಖರೀದಿ ಮಾಡೋದನ್ನ ಈಗ ಕಮರ್ಶಿಯಲ್ ಸ್ಟ್ರೀಟ್ ಗರುಡ ಮಾಲ್ ಮುಂತಾದ ಕಡೆಗಳಲ್ಲಿ ದುಪ್ಪಟ್ಟು ಬೆಲೆ ಕೊಟ್ಟು ಕೊಂಡುಕೋಳ್ತೇವೆ. ಆದ್ರು ನಮ್ಮ ಪಕ್ಕದ ಸೀಟ್ ನಲ್ಲಿ ಕೊತುಕೊಳ್ಳುವನ ಸಂಬಳ ನೋಡಿ ಹೊಟ್ಟೆ ಉರಿಸಿಕೊಳ್ಳುವದನ್ನು ಇನ್ನು ಬಿಟ್ಟಿರುವುದಿಲ್ಲ. ನಾರ್ಮಲ್ ಜೀನ್ಸ್ ಹೋಗಿ ಲೀ,ಲೇವಿಸ್ ಬಂದಿರುತ್ತೆ. ನಾರ್ಮಲ್ ಶೊಸ್ ಹೋಗಿ ರೀಬಾಕ್,ನೈಕಿ ಬಂದಿರುತ್ತೆ. ಪಕ್ಕದ ಅಂಗಡಿ ಹೋಗಕ್ಕೊ ಗಾಡಿನೇ ಬೇಕಾಗುತ್ತೆ. ಪಕ್ಕದ ಅಂಗಡಿ ಹೋಗಕ್ಕೊ ಗಾಡಿನೇ ಬೇಕಾಗುತ್ತೆ.
ಇಪ್ಪತೈದರಿಂದ ಮೊವತ್ತು ,ನಲವತ್ತು ಆಗುತ್ತೆ,ಒಂದು ಸಲ ಬೇರೆ ದೇಶಕ್ಕೊ ಹೋಗಿ ಬಂದಾಗಿರುತ್ತೆ. ಮುಂಚೆ ಚೆನ್ನಾಗಿದ್ದ ಬೆಂಗಳೊರು ಇದ್ದಕ್ಕಿದ್ದ ಹಾಗೆ ಚೆನ್ನಾಗಿ ಕಾಣುವುದಿಲ್ಲ. ಊರಿಗೆ ಹೋಗಲು ವಾಲ್ವೋ ಬಸ್ಸೇ ಬೇಕಾಗುತ್ತೆ. ಮನೇಲೀ ಶೆಖೆ ತಡೆಯಲು ಆಗದೇ ಏಸಿ ಹಾಕಲು ಯೋಚನೆ ಮಾಡ್ತೀವಿ.

ಆದ್ರು ಯೋಚನೆ ಮಾಡಿ ಐದು ಸಾವಿರದಲ್ಲಿ ಇದ್ದ ಖುಷಿ ಐವತ್ತು ಸಾವಿರದಲ್ಲಿ ಇರೋದಿಲ್ಲ.


ಇನ್ನೂ ಇದೆ....

Monday, February 25, 2008

ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???

ಯಾಕಪ್ಪ ಏನಾಯ್ತು ಅಂತ ತಲೆ ಕೆಡ್ಸ್ಕೋತೀದೀರಾ ??? ಟೈಂ ಮೇಷಿನ ಇದ್ದಿದ್ರೆ ನಾನು ಸ್ವಲ್ಪ ನನ್ನ ಬಾಲ್ಯದ ದಿನ ಗಳಿಗೆ ಹೋಗಿ ಬರ್ತಾ ಇದ್ದೆ.ನಿಮಗೆ ಯಾವತ್ತಾದ್ರು ಅನ್ಸಿಲ್ವಾ ? ವಾಪಾಸ ನಿಮ್ಮ ಬಾಲ್ಯದ ದಿನಗಳಿಗೆ ಹೋಗ್ಬೇಕು ಅಂತ ? ಒಂದು ಸಲ ನಿಮ್ಮ ಸುತ್ತಮುತ್ತಾ ಇರೋ ಮಕ್ಕಳನ್ನು ನೋಡಿ ಏನು ಅರಾಮಾಗಿ ಆಟ ಆಡಿಕೊಂಡು ಇರ್ತಾವೆ,ತಮ್ಮದೆ ಪ್ರಪಂಚ ದಲ್ಲಿ ಮುಳುಗಿ ಹೋಗಿರ್ತಾವೆ. ನಿಮಗೆ ಯಾವತ್ತಾದ್ರು ಅನ್ಸಿಲ್ವಾ ಒಂದು ಸಲ ನಾವುಗಳು ಮಕ್ಕಳ ತರ ಆಗ್ಬೇಕು,ಈ ತರಲೆ ತಾಪತ್ರಯ ಎಲ್ಲಾ ಮರೆತು ಹಾಯಾಗಿ ಆಟ ಆಡ್ಕೋಂಡು ಇರ್ಬೇಕು ಅಂತ ?

ನಾನಂತು ದಿನಾ ಇದನ್ನೇ ಯೋಚನೆ ಮಾಡ್ತಾ ಇರ್ತೇನೆ, ಯಾವಾಗ್ಲಾದ್ರು ಚಾನ್ಸ್ ಸಿಕ್ಕಿದ್ರೆ ಒಂದೇ ಒಂದು ಸಲ ನನ್ನ ಬಾಲ್ಯದ ದಿನಗಳಿಗೆ ಹೋಗ್ಬೇಕು ಅಂತ.ಆದ್ರೆ ನಮ್ಮ ಜಗತ್ತು ಏಲ್ಲಾ ರೀತಿ ಯಲ್ಲಿ ಮುಂದುವರೆದಿದ್ರು,ನಮ್ಮ ಹತ್ತಿರೆ ಎಷ್ಟೇ ದುಡ್ಡು ಇದ್ರು ಒಂದು ದಿನದ ಬಾಲ್ಯವನ್ನು ತಗೋಳಕ್ಕೆ ಆಗಲ್ಲ.

ನಿನ್ನೆ ನನ್ನ ಗೆಳೆಯನ ಜೊತೆಗೆ ಚಾಟ್ ಮಾಡ್ತಾ ಇದ್ದೆ.ಅವನು ನನ್ನ ಬಾಲ್ಯ ಸ್ನೇಹಿತ,ಸುಮಾರಾಗಿ ೧ ನೇ ಕ್ಲಾಸಿಂದ ನನ್ನ ಜೊತೆಯೇ ಓದಿದವನು, ನನ್ನ ಜೊತೆಯೇ ಆಟ ಆಡಿದವನು. ಅವನಿಗೆ ನಾನು ಹೇಳ್ತಾ ಇದ್ದೆ ಒಂದು ದಿನ ನಾನು ಓದಿದ ಶಾಲೆ ನೋಡ್ಬೇಕು ಅಂತ ,ಅಲ್ಲಿಗೆ ಹೋಗಿ ನಾನು ಆಟ ಆಡುತ್ತಿದ್ದ ಜಾಗ,ಹರಟೆ ಹೊಡಿಯುತ್ತಿದ್ದ ಜಾಗ ಎಲ್ಲ ನೋಡ್ಬೇಕು ಅಂತ ,ಒಂದು ದಿನ ಪ್ಲಾನ್ ಮಾಡಿಕೊಂಡು ಬರ್ತೇನೆ ಅಂತ. ಅವನು ಹೇಳಿದ ಒಂದು ಮಾತು ಯಾಕೋ ನನ್ನ ಹೃದಯ ಮುಟ್ಟಿತು ,"ನೋಡು ಮೊನ್ನೆ ನಾನು ಮತ್ತೆ ನನ್ನ ಮಾವನ ಮಗ ಇಬ್ರು ಸುಮ್ನೆ ಇದ್ದಕ್ಕಿದ್ದ ಹಾಗೆ ಆಗುಂಬೆಗೆ ಹೋಗೋಣ ಅಂತ ಹೊರೆಟೆವು,ಅಲ್ಲಿಂದ ಹಾಗೇ ಸೀತಾನದಿಗೆ ಹೋಗಿ ನೀರು ದೋಸೆ ತಿಂದ್ವಿ.ಅಲ್ಲಿಂದ ಕಾರ್ಕಳ, ಅಲ್ಲಿಂದ ಉಡುಪಿ,ಅಲ್ಲಿಂದ ಮಂಗಳೊರು,ಅಲ್ಲಿಂದ ಕಾಸರಗೋಡು..ಹಂಗೇ ದಾರಿ ಯಲ್ಲಿ ಸಿಕ್ಕ ಎಲ್ಲ ನೆಂಟರ ಮನಗೆ ಹೋಗಿ ಬಂದ್ವಿ. ನಾವು ಏನಾದ್ರು ಪ್ಲಾನ್ ಮಾಡಿಕೊಂಡು ಏನಾದ್ರು ಹೊರಟಿದ್ರೆ ಹತ್ತಿರದ ಹರಿಹರಪುರಕ್ಕು ಹೋಗಿ ಬರ್ತಾ ಇರ್ಲಿಲ್ಲ ಅನ್ಸುತ್ತೆ". ಇದರಲ್ಲಿ ಬಹಳ ಅರ್ಥ ಇದೆ ,ನಾವುಗಳು ಏಲ್ಲದಕ್ಕು ಪ್ಲಾನ ಮಾಡಿಕೊಂಡು ಸೂಕ್ತವಾದ ಸಮಯಕ್ಕೆ ಕಾಯ್ತಾ ಇರ್ತೇವೆ,ಸಮಯ ಸರಿ ಆಗಿ ಬಂದ್ರೆ ಸರಿ ಇಲ್ಲಾಂದ್ರೇ ಸುಮ್ನೆ ಟೈಂ ಇಲ್ಲ ಅಂದುಕೊಂಡು ಜಾರಿಕೊಂಡು ಬಿಡ್ತೇವೆ.

ಇಲ್ಲಿ ಪಾಯಿಂಟ್ ಏನಪ್ಪ ಅಂದ್ರೆ ,ಸುಮ್ಮನೆ ತಲೆ ಕೆಡಿಸಿಕೊಂಡು ಅಲ್ಲಿಗೆ ಇಲ್ಲಿಗೆ ಹೋಗ್ಬೇಕು ಅಂತ ಪ್ಲಾನ ಮಾಡೋದು ಬಿಟ್ಟು ಯಾವಾಗ ಎಲ್ಲಿಗೆ ಹೋಗಬೇಕು ಅನ್ಸುತ್ತೋ ಸುಮ್ಮನೆ ಹೊರಡಬೇಕು.

ಈಗ ಸುಮ್ಮನೆ ಹಂಗೇ ಆಲೋಚನೆ ಮಾಡಿ ,ನಿಮ್ಮ ಬಾಲ್ಯ ದ ದಿನಗಳಲ್ಲಿ ಬೆಳಿಗ್ಗೆ ಬೆಳಿಗ್ಗೆ ಎದ್ದು ಏನಾರ ಆಟ ಆಡಕ್ಕೆ ಓಡಿ ಹೋಗಿರ್ತಾ ಇದ್ವಿ ಈಗ ಆತರ ಆಗುತ್ತ ? ಮತ್ತೆ ಯಾವುದೊ ಸಮಯದಲ್ಲಿ ಬಂದು ಅಮ್ಮ ನ ಹತ್ತಿರ ಬೈಸಿಕೊಂಡು ತಿಂಡಿ ನ ಗಬಗಬ ಅಂತ ತಿಂದುಕೊಂಡು ಅಮ್ಮಂಗೆ ಗೊತ್ತಾಗದೇ ಹಾಗೇ ಹಿತ್ತಿಲಿನ ಬಾಗಿಲಿನಿಂದ ಓಡಿ ಹೋಗೋದು, ಮಧ್ಯಾನ ದ ಉರಿ ಬಿಸಿಲನ್ನೂ ಲೆಕ್ಕಿಸದೇ ಆಟ ಆಡೋದು,ಸೈಕಲ್ ಕಲಿಯಕ್ಕೆ ಅಪ್ಪನ ಹತ್ತಿರ ಒಂದು ರುಪಾಯಿ ಸಿಕ್ಕಿದ್ದೇ ತಡ ಮತ್ತೆ ಸೈಕಲ ಶಾಪ್ಗೆ ಓಡೋದು. ಎಲ್ಲಾ ಎಷ್ಟು ಮಜಾ ಇತ್ತಲ್ರೀ.... ಈಗ ನೋಡಿ ಈಗ್ಲೊ ಒಂತರಾ ಓಡ್ತೀವಿ ಬೆಳಿಗ್ಗೆ ಬೆಳಿಗ್ಗ ಆದ್ರೆ ಅದರಲ್ಲಿ ಮಜಾ ಇರಲ್ಲ,ಈಗ್ಲೊ ಗಬಗಬ ಅಂತ ತಿಂತೀವಿ ಅದರಲ್ಲೊ ಮಜಾ ಇರಲ್ಲ. ಕೊನೆಗೆ ಈಗ್ಲೊ ಒಂದು ರುಪಾಯಿ ಏನು ಒಂದು ಲಕ್ಶ ದುಡೀತೀವಿ ಆದ್ರು ಆಗ ಸಿಕ್ತಾ ಇದ್ದ ಮಜಾ ಈಗ ಸಿಗುತ್ತೇನ್ರಿ ?


ನಿಮ್ಮ ಹತ್ತಿರ ಏನಾದ್ರು ಟೈಂ ಮೆಷಿನ್ ಇದ್ದಿದ್ರೆ ಏನು ಮಾಡ್ತಾ ಇದ್ರಿ ? ಬಾಲ್ಯದ ಯಾವ ದಿನಗಳಿಗೆ ಹೋಗ್ತಾ ಇದ್ರಿ ? ನನಗೆ ಬರೆದು ತಿಳಿಸಿ....