ಯಾಕಪ್ಪ ಏನಾಯ್ತು ಅಂತ ತಲೆ ಕೆಡ್ಸ್ಕೋತೀದೀರಾ ??? ಟೈಂ ಮೇಷಿನ ಇದ್ದಿದ್ರೆ ನಾನು ಸ್ವಲ್ಪ ನನ್ನ ಬಾಲ್ಯದ ದಿನ ಗಳಿಗೆ ಹೋಗಿ ಬರ್ತಾ ಇದ್ದೆ.ನಿಮಗೆ ಯಾವತ್ತಾದ್ರು ಅನ್ಸಿಲ್ವಾ ? ವಾಪಾಸ ನಿಮ್ಮ ಬಾಲ್ಯದ ದಿನಗಳಿಗೆ ಹೋಗ್ಬೇಕು ಅಂತ ? ಒಂದು ಸಲ ನಿಮ್ಮ ಸುತ್ತಮುತ್ತಾ ಇರೋ ಮಕ್ಕಳನ್ನು ನೋಡಿ ಏನು ಅರಾಮಾಗಿ ಆಟ ಆಡಿಕೊಂಡು ಇರ್ತಾವೆ,ತಮ್ಮದೆ ಪ್ರಪಂಚ ದಲ್ಲಿ ಮುಳುಗಿ ಹೋಗಿರ್ತಾವೆ. ನಿಮಗೆ ಯಾವತ್ತಾದ್ರು ಅನ್ಸಿಲ್ವಾ ಒಂದು ಸಲ ನಾವುಗಳು ಮಕ್ಕಳ ತರ ಆಗ್ಬೇಕು,ಈ ತರಲೆ ತಾಪತ್ರಯ ಎಲ್ಲಾ ಮರೆತು ಹಾಯಾಗಿ ಆಟ ಆಡ್ಕೋಂಡು ಇರ್ಬೇಕು ಅಂತ ?
ನಾನಂತು ದಿನಾ ಇದನ್ನೇ ಯೋಚನೆ ಮಾಡ್ತಾ ಇರ್ತೇನೆ, ಯಾವಾಗ್ಲಾದ್ರು ಚಾನ್ಸ್ ಸಿಕ್ಕಿದ್ರೆ ಒಂದೇ ಒಂದು ಸಲ ನನ್ನ ಬಾಲ್ಯದ ದಿನಗಳಿಗೆ ಹೋಗ್ಬೇಕು ಅಂತ.ಆದ್ರೆ ನಮ್ಮ ಜಗತ್ತು ಏಲ್ಲಾ ರೀತಿ ಯಲ್ಲಿ ಮುಂದುವರೆದಿದ್ರು,ನಮ್ಮ ಹತ್ತಿರೆ ಎಷ್ಟೇ ದುಡ್ಡು ಇದ್ರು ಒಂದು ದಿನದ ಬಾಲ್ಯವನ್ನು ತಗೋಳಕ್ಕೆ ಆಗಲ್ಲ.
ನಿನ್ನೆ ನನ್ನ ಗೆಳೆಯನ ಜೊತೆಗೆ ಚಾಟ್ ಮಾಡ್ತಾ ಇದ್ದೆ.ಅವನು ನನ್ನ ಬಾಲ್ಯ ಸ್ನೇಹಿತ,ಸುಮಾರಾಗಿ ೧ ನೇ ಕ್ಲಾಸಿಂದ ನನ್ನ ಜೊತೆಯೇ ಓದಿದವನು, ನನ್ನ ಜೊತೆಯೇ ಆಟ ಆಡಿದವನು. ಅವನಿಗೆ ನಾನು ಹೇಳ್ತಾ ಇದ್ದೆ ಒಂದು ದಿನ ನಾನು ಓದಿದ ಶಾಲೆ ನೋಡ್ಬೇಕು ಅಂತ ,ಅಲ್ಲಿಗೆ ಹೋಗಿ ನಾನು ಆಟ ಆಡುತ್ತಿದ್ದ ಜಾಗ,ಹರಟೆ ಹೊಡಿಯುತ್ತಿದ್ದ ಜಾಗ ಎಲ್ಲ ನೋಡ್ಬೇಕು ಅಂತ ,ಒಂದು ದಿನ ಪ್ಲಾನ್ ಮಾಡಿಕೊಂಡು ಬರ್ತೇನೆ ಅಂತ. ಅವನು ಹೇಳಿದ ಒಂದು ಮಾತು ಯಾಕೋ ನನ್ನ ಹೃದಯ ಮುಟ್ಟಿತು ,"ನೋಡು ಮೊನ್ನೆ ನಾನು ಮತ್ತೆ ನನ್ನ ಮಾವನ ಮಗ ಇಬ್ರು ಸುಮ್ನೆ ಇದ್ದಕ್ಕಿದ್ದ ಹಾಗೆ ಆಗುಂಬೆಗೆ ಹೋಗೋಣ ಅಂತ ಹೊರೆಟೆವು,ಅಲ್ಲಿಂದ ಹಾಗೇ ಸೀತಾನದಿಗೆ ಹೋಗಿ ನೀರು ದೋಸೆ ತಿಂದ್ವಿ.ಅಲ್ಲಿಂದ ಕಾರ್ಕಳ, ಅಲ್ಲಿಂದ ಉಡುಪಿ,ಅಲ್ಲಿಂದ ಮಂಗಳೊರು,ಅಲ್ಲಿಂದ ಕಾಸರಗೋಡು..ಹಂಗೇ ದಾರಿ ಯಲ್ಲಿ ಸಿಕ್ಕ ಎಲ್ಲ ನೆಂಟರ ಮನಗೆ ಹೋಗಿ ಬಂದ್ವಿ. ನಾವು ಏನಾದ್ರು ಪ್ಲಾನ್ ಮಾಡಿಕೊಂಡು ಏನಾದ್ರು ಹೊರಟಿದ್ರೆ ಹತ್ತಿರದ ಹರಿಹರಪುರಕ್ಕು ಹೋಗಿ ಬರ್ತಾ ಇರ್ಲಿಲ್ಲ ಅನ್ಸುತ್ತೆ". ಇದರಲ್ಲಿ ಬಹಳ ಅರ್ಥ ಇದೆ ,ನಾವುಗಳು ಏಲ್ಲದಕ್ಕು ಪ್ಲಾನ ಮಾಡಿಕೊಂಡು ಸೂಕ್ತವಾದ ಸಮಯಕ್ಕೆ ಕಾಯ್ತಾ ಇರ್ತೇವೆ,ಸಮಯ ಸರಿ ಆಗಿ ಬಂದ್ರೆ ಸರಿ ಇಲ್ಲಾಂದ್ರೇ ಸುಮ್ನೆ ಟೈಂ ಇಲ್ಲ ಅಂದುಕೊಂಡು ಜಾರಿಕೊಂಡು ಬಿಡ್ತೇವೆ.
ಇಲ್ಲಿ ಪಾಯಿಂಟ್ ಏನಪ್ಪ ಅಂದ್ರೆ ,ಸುಮ್ಮನೆ ತಲೆ ಕೆಡಿಸಿಕೊಂಡು ಅಲ್ಲಿಗೆ ಇಲ್ಲಿಗೆ ಹೋಗ್ಬೇಕು ಅಂತ ಪ್ಲಾನ ಮಾಡೋದು ಬಿಟ್ಟು ಯಾವಾಗ ಎಲ್ಲಿಗೆ ಹೋಗಬೇಕು ಅನ್ಸುತ್ತೋ ಸುಮ್ಮನೆ ಹೊರಡಬೇಕು.
ಈಗ ಸುಮ್ಮನೆ ಹಂಗೇ ಆಲೋಚನೆ ಮಾಡಿ ,ನಿಮ್ಮ ಬಾಲ್ಯ ದ ದಿನಗಳಲ್ಲಿ ಬೆಳಿಗ್ಗೆ ಬೆಳಿಗ್ಗೆ ಎದ್ದು ಏನಾರ ಆಟ ಆಡಕ್ಕೆ ಓಡಿ ಹೋಗಿರ್ತಾ ಇದ್ವಿ ಈಗ ಆತರ ಆಗುತ್ತ ? ಮತ್ತೆ ಯಾವುದೊ ಸಮಯದಲ್ಲಿ ಬಂದು ಅಮ್ಮ ನ ಹತ್ತಿರ ಬೈಸಿಕೊಂಡು ತಿಂಡಿ ನ ಗಬಗಬ ಅಂತ ತಿಂದುಕೊಂಡು ಅಮ್ಮಂಗೆ ಗೊತ್ತಾಗದೇ ಹಾಗೇ ಹಿತ್ತಿಲಿನ ಬಾಗಿಲಿನಿಂದ ಓಡಿ ಹೋಗೋದು, ಮಧ್ಯಾನ ದ ಉರಿ ಬಿಸಿಲನ್ನೂ ಲೆಕ್ಕಿಸದೇ ಆಟ ಆಡೋದು,ಸೈಕಲ್ ಕಲಿಯಕ್ಕೆ ಅಪ್ಪನ ಹತ್ತಿರ ಒಂದು ರುಪಾಯಿ ಸಿಕ್ಕಿದ್ದೇ ತಡ ಮತ್ತೆ ಸೈಕಲ ಶಾಪ್ಗೆ ಓಡೋದು. ಎಲ್ಲಾ ಎಷ್ಟು ಮಜಾ ಇತ್ತಲ್ರೀ.... ಈಗ ನೋಡಿ ಈಗ್ಲೊ ಒಂತರಾ ಓಡ್ತೀವಿ ಬೆಳಿಗ್ಗೆ ಬೆಳಿಗ್ಗ ಆದ್ರೆ ಅದರಲ್ಲಿ ಮಜಾ ಇರಲ್ಲ,ಈಗ್ಲೊ ಗಬಗಬ ಅಂತ ತಿಂತೀವಿ ಅದರಲ್ಲೊ ಮಜಾ ಇರಲ್ಲ. ಕೊನೆಗೆ ಈಗ್ಲೊ ಒಂದು ರುಪಾಯಿ ಏನು ಒಂದು ಲಕ್ಶ ದುಡೀತೀವಿ ಆದ್ರು ಆಗ ಸಿಕ್ತಾ ಇದ್ದ ಮಜಾ ಈಗ ಸಿಗುತ್ತೇನ್ರಿ ?
ನಿಮ್ಮ ಹತ್ತಿರ ಏನಾದ್ರು ಟೈಂ ಮೆಷಿನ್ ಇದ್ದಿದ್ರೆ ಏನು ಮಾಡ್ತಾ ಇದ್ರಿ ? ಬಾಲ್ಯದ ಯಾವ ದಿನಗಳಿಗೆ ಹೋಗ್ತಾ ಇದ್ರಿ ? ನನಗೆ ಬರೆದು ತಿಳಿಸಿ....
Monday, February 25, 2008
Subscribe to:
Post Comments (Atom)
1 comment:
I would have gone stright to my High School and College days. GJC, Town Hall, the First Love Letter, JCBM College, KKB, Venkatesh Bhat, Krishnappayya, GKB, college friends adn all.......are never forgettable memories.
Post a Comment