ಓದು ಮುಗಿಸಿ ಕೆಲಸ ಅರಸಿ ಬೆಂಗಳೊರಿಗೆ ಬಂದು ಕಂಪನಿಯಿಂದ ಕಂಪನಿಗೆ ಸುತ್ತಾಡಿ ಸುತ್ತಾಡಿ ಸಾಕಾಗಿ ಹೋದಾಗ ,ಐದು ಸಾವಿರ ಸಂಬಳ ಬಂದ್ರು ಸಾಕಪ್ಪ ಅನ್ನಿಸಿಬಿಟ್ಟಿರುತ್ತದೆ. ಅದೇ ಐದು ಸಾವಿರ ಸಂಬಳ ಬಂದಾಗ ಇಷ್ಟೆಲ್ಲ ಓದಿ ಬರೀ ಐದು ಸಾವಿರ ಸಂಬಳನಾ ? ಅನ್ಸುತ್ತೆ..ಬೇರೆ ಅವರ ಸಂಬಳ ನೋಡಿ ಆ ನನ್ಮಗ ನನಗಿಂತ ಕಮ್ಮಿ ಮಾರ್ಕ್ಸ್ ಬಂದ್ರು ನನಗಿಂತ ಹತ್ತು ಸಾವಿರ ಜಾಸ್ತಿ ದುಡೀತಾನೆ..ನನಗೆ ಯಾವಾಗಪ್ಪ ಹದಿನೈದು ಸಾವಿರ ಸಂಬಳ ಬರೋದು ಅನ್ಸುತ್ತೆ. ಐದು ಸಾವಿರ ಬರ್ತಾ ಇದ್ದಾಗ ಫೋರಂ ಶಾಪಿಂಗ್ ಅಂದ್ರೆ ಬರೀ ವಿಂಡೋ ಶಾಪಿಂಗ್ ಅಷ್ಟೆ... ಸಿನೇಮಾ ಏನಾದ್ರು ನೋಡ್ಬೇಕು ಅಂದ್ರೆ ಕಾಮಾಕ್ಯ ,ಊರ್ವಶಿ,ನವರಂಗ್...ಎನಾರ ತಿನ್ನಬೇಕು ಅಂದ್ರೆ ಶಾಂತಿಸಾಗರ್....ಅದು ಇದು ಅಷ್ಟೇ. ಬ್ರಾಂಡೆಡ್ ಬಟ್ಟೆಗೆ ಸುಮ್ಮನೆ ಒಂದು ಎರಡು ಸಾವಿರ ಕೊಡೋ ಬದಲು ಅದೇ ದುಡ್ಡಿನಲ್ಲಿ ಮೊರು ಜೊತೆ ಬಟ್ಟೆ ಬರುತ್ತೆ ಅಂತ ಅನ್ಸುತ್ತೆ.
ಅದೇ ಹದಿನೈದು ಸಾವಿರ ಸಂಬಳ ಬರೋ ಹೊತ್ತಿಗೆ ಟು ವೀಲರ್ ಬಂದು ಬಿಟ್ಟಿರುತ್ತದೆ.ಮುಂಚೆ ಅರಾಮಾಗಿ ಹೋಗುತ್ತಿದ್ದ ಬಿಟಿಎಸ್ ಬಸ್ಸು ಸಾಕಾಗಿ ಹೋಗಿರುತ್ತದೆ.ಬೇರ ಅವರನ್ನು ನೋಡಿ ಅದೆಂಗೆ ಬಸ್ಸಿನಲ್ಲಿ ಬರ್ತೀರಾ ಅಂತೀವಿ.ಕೆಲ ಸಮಯದ ಮುಂಚೆ ನಾವುಗಳು ಬಸ್ಸಿನಲ್ಲಿ ಜೋತಾಡಿ ಬರ್ತಾ ಇದ್ವಿ ಅಂತ ಮರೇತೇ ಹೋಗಿರುತ್ತದೆ.
ಓದಿದ ಕಾಲೇಜಿಗೆ ಹೋದ್ರೆ ಒಂತರಾ ರೆಸ್ಪೆಕ್ಟ್ ಸಿಗತ್ತೆ.ಕಾಲೇಜಿನಲ್ಲಿ ಪಾಠ ಮಾಡಿದ ಲೆಕ್ಚರರ್ಸ್ ಒಂತರಾ ನೋಡ್ತಾರೆ.ನಮಗೇ ನಮ್ಮ ಬಗ್ಗೆ ಒಂತರಾ ಹೆಮ್ಮೆ ಅನ್ಸುತ್ತೆ.
ಕ್ರಮೇಣ ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರ ಸಂಬಳ ಬರುತ್ತದೆ. ಟು ವೀಲರ್ ಸರ್ವಿಸ್ ಕೊಟ್ಟಾಗ ಮುಂಚೆ ಬಸ್ಸಿನಲ್ಲಿ ಬರ್ತಾ ಇದ್ದೋರು ಆಟೋ ರಿಕ್ಷ ದಲ್ಲಿ ಬರಕ್ಕೆ ಪ್ರಾರಂಭ ಮಾಡ್ತೀವಿ. ಮುಂಚೆ ಬರೀ ವಿಂಡೋ ಶಾಪಿಂಗ್ ಮಾಡ್ತಾ ಇದ್ದ ಜಾಗದಲ್ಲಿ ಬಟ್ಟೆಬರೆ ಕೊಂಡುಕೊಳ್ಳಲು ಪ್ರಾರಂಭ ಮಾಡ್ತೀವಿ.ವೀಕೆಂಡ್ಸ್ ಹೊರಗಡೆ ತಿನ್ನಲು ಸ್ಟಾರ್ಟ ಮಾಡ್ತೀವಿ. ಮುಂಚೆ ಬರೀ ಶಾಂತಿಸಾಗರ ಗೆ ಊಟಕ್ಕೆ ಹೋಗ್ತಾ ಇದ್ದೋರು ಈಗ ಇಂದಿರಾನಗರ,ಎಂಜಿ ರೋಡ್ ,ಬ್ರಿಗೇಡ್ ರೋಡ್ ಗೆ ಹೋಗ್ತೀವಿ.ಮುಂಚೆ ಗಾಂಧಿಬಝಾರ್,ಮಲ್ಲೇಶ್ವರಂ ಲಿ ಖರೀದಿ ಮಾಡೋದನ್ನ ಈಗ ಕಮರ್ಶಿಯಲ್ ಸ್ಟ್ರೀಟ್ ಗರುಡ ಮಾಲ್ ಮುಂತಾದ ಕಡೆಗಳಲ್ಲಿ ದುಪ್ಪಟ್ಟು ಬೆಲೆ ಕೊಟ್ಟು ಕೊಂಡುಕೋಳ್ತೇವೆ. ಆದ್ರು ನಮ್ಮ ಪಕ್ಕದ ಸೀಟ್ ನಲ್ಲಿ ಕೊತುಕೊಳ್ಳುವನ ಸಂಬಳ ನೋಡಿ ಹೊಟ್ಟೆ ಉರಿಸಿಕೊಳ್ಳುವದನ್ನು ಇನ್ನು ಬಿಟ್ಟಿರುವುದಿಲ್ಲ. ನಾರ್ಮಲ್ ಜೀನ್ಸ್ ಹೋಗಿ ಲೀ,ಲೇವಿಸ್ ಬಂದಿರುತ್ತೆ. ನಾರ್ಮಲ್ ಶೊಸ್ ಹೋಗಿ ರೀಬಾಕ್,ನೈಕಿ ಬಂದಿರುತ್ತೆ. ಪಕ್ಕದ ಅಂಗಡಿ ಹೋಗಕ್ಕೊ ಗಾಡಿನೇ ಬೇಕಾಗುತ್ತೆ. ಪಕ್ಕದ ಅಂಗಡಿ ಹೋಗಕ್ಕೊ ಗಾಡಿನೇ ಬೇಕಾಗುತ್ತೆ.
ಇಪ್ಪತೈದರಿಂದ ಮೊವತ್ತು ,ನಲವತ್ತು ಆಗುತ್ತೆ,ಒಂದು ಸಲ ಬೇರೆ ದೇಶಕ್ಕೊ ಹೋಗಿ ಬಂದಾಗಿರುತ್ತೆ. ಮುಂಚೆ ಚೆನ್ನಾಗಿದ್ದ ಬೆಂಗಳೊರು ಇದ್ದಕ್ಕಿದ್ದ ಹಾಗೆ ಚೆನ್ನಾಗಿ ಕಾಣುವುದಿಲ್ಲ. ಊರಿಗೆ ಹೋಗಲು ವಾಲ್ವೋ ಬಸ್ಸೇ ಬೇಕಾಗುತ್ತೆ. ಮನೇಲೀ ಶೆಖೆ ತಡೆಯಲು ಆಗದೇ ಏಸಿ ಹಾಕಲು ಯೋಚನೆ ಮಾಡ್ತೀವಿ.
ಆದ್ರು ಯೋಚನೆ ಮಾಡಿ ಐದು ಸಾವಿರದಲ್ಲಿ ಇದ್ದ ಖುಷಿ ಐವತ್ತು ಸಾವಿರದಲ್ಲಿ ಇರೋದಿಲ್ಲ.
ಇನ್ನೂ ಇದೆ....
Friday, February 29, 2008
Subscribe to:
Post Comments (Atom)
7 comments:
ಪ್ರಿಯ ಅಶೋಕ ಭಟ್ಟರೇ,
ನಮಸ್ಕಾರ ಹೇಗಿದ್ದೀರಾ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
- ಅಮರ
ಪಯಣ...ಐದು ಸಾವಿರದಿಂದ ಐವತ್ತು ಸಾವಿರದವರೆಗೆ ..........This was a great posting man......i liked this...please take it to part 2....I hope it was SASHESHA....I liked this because, it was my story as well... [:)]
You are going great.....Keep continue
GOOD GOING MAN...........ADRE UR 1st PARA IS LIKE AS THOUGH SOME ELDERLY PERSON IS LITERALLY COMMENTING ON UR BEHAVIOUR ...... IF U CAN PLZ MAKE CHANGES LIKE UR WRITING IT URSELF ABT UR PAST......I THINK THAT SOUNDS NATURAL
ಮಲೆನಾಡಿನ ಸರಳತೆಯನ್ನು ನಿಮ್ಮ ಬ್ಲಾಗ್ ನಲ್ಲಿ ಕಂಡೆ. ಆಗಾಗ ಬಂದು ಓದುವವನಾಘುವೆ. ಒಲವಿನಿಂದ ಬಾನಾಡಿ
ಮನುಜನ ಆಸೆಗೆ ಮಿತಿ ಎಲ್ಲಿ?
ಮುಂದಕ್ಕೇನು? ಬೇಗ ಬರೀರಿ......
Post a Comment